ಯೋಜನಾ ತರಂಗ
ದೀರಜ್ ಬೆಳಗ್ಗೆ ಎದ್ದವನೇ ಕೆಲಸಕ್ಕೆ ಹೊರಟು ನಿಂತ.ಕೆಲವೊಮ್ಮೆ ಹೀಗೆ ಕೆಲಸದ ಹಸಿವು ಹೊಟ್ಟೆಯ ಹಸಿವನ್ನು ಮೀರಿ ನಿಂತಿರುತ್ತದೆ. ಇತ್ತ ಮಗನು ರಾತ್ರಿ ಎಲ್ಲಾ ನಿದ್ರೆ ಕೊಡದೆ ಇದ್ದುದರಿಂದ ಈಕೆ ಗಾಢ ನಿದ್ರೆಯಲ್ಲಿದ್ದಳು.ಅವಳ ಮುಂಗುರುಳನ್ನು ನೇವರಿಸಿ ಮಗನನ್ನೊಮ್ಮೆ ಮುದ್ದಾಡಿದ,ಪ್ರೀತಿಯಿಂದ. ಅವನು ಘನತೆ ಗೌರವಗಳ ಉತ್ತುಂಗ ದಲ್ಲಿ ನಿಂತಿದ್ದ ಅಪ್ಪಯ್ಯ ದೀಕ್ಷಿತ್ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿ.
ಅಪ್ಪಯ್ಯ ದೀಕ್ಷಿತ್ ಅವತ್ತು ಮನೆಯಲ್ಲಿ ಇರಲಿಲ್ಲ ವ್ಯಾಪಾರ ವಹಿವಾಟು ನಡೆಸುವ ಸಲುವಾಗಿ ದೂರದ ಊರಿಗೆ ಹೋಗಿದ್ದರು. ಹೇಗೂ ಅವರ ತಂಗಿಯ ಮನೆಯೂ ಅಲ್ಲಿಯೇ ಅದೇ ಊರಿನಲ್ಲಿ ಇದ್ದುದರಿಂದ ಅಲ್ಲಿಯೇ ಉಳಿದು ಮರುದಿನ ಬಂದರಾಯಿತು ಎಂದುಕೊಂಡು ಮುಂಜಾವಿನ ಮೊದಲೇ ಮನೆಯನ್ನು ಬಿಟ್ಟು ಹೊರಟಿದ್ದರು.ಇತ್ತ ಧೀರಜ್ ಜೊತೆಗೆ ಕೆಲಸ ಮಾಡುವ ನಾಲ್ಕು ಜನ ಖದೀಮರು ಹೊಂಚು ಹಾಕಲು ಶುರುಮಾಡಿದರು.
ಇತ್ತ ನಿರ್ಮಲಾ ಎದ್ದು ಪತಿ ಅದಾಗಲೇ ಕೆಲಸಕ್ಕೆ ಹೋಗಿದ್ದಾನೆಂದು ತಿಳಿದುಕೊಂಡು ಮನೆಯ ಕೆಲಸ ಕಾರ್ಯಗಳನ್ನು ಮಾಡಿಟ್ಟು.ಬೆಳಗಿನ ಉಪಹಾರ ಮುಗಿಸಿದಳು.ಮಗನು ಏಳುವ ಮುನ್ನ ಮನೆಯ ಕೆಲಸವನ್ನು ಮಾಡಿಟ್ಟರೆ ಉಳಿದ ಸಮಯ ಅವನೊಂದಿಗೆ ಕಳೆಯಬಹುದು ಎನ್ನುವ ಮೋಹ ಅವಳದ್ದು.ಅವನು ಬೆಳಗಿನ ಜಾವದವರೆಗೂ ಎಚ್ಚರ ಇದ್ದು ಅದಾಗಲೇ ಮಲಗಿದ್ದ.ಅವಳು ಎಂದುಕೊಂಡಂತೆಯೇ ಅವಳ ಕೆಲಸ ಮುಗಿಯುತ್ತಿದ್ದಂತೆ ಅವನು ಎದ್ದು ಕೂಗತೊಡಗಿದ್ದ.
ಧೀರಜ್ ಪ್ರಾಮಾಣಿಕ ವ್ಯಕ್ತಿ ಎನ್ನುವುದರ ಸುಳಿವು ಅವರಿಗಿತ್ತು. ಅವರು ಇವನನ್ನು ಗುಂಪಿನಲ್ಲಿ ಶ್ಯಾಮೀಲು ಮಾಡಿಕೊಂಡಿರಲಿಲ್ಲ. ಯೋಜನೆ ಹೀಗಿತ್ತು. ಅಪ್ಪಯ್ಯ ದೀಕ್ಷಿತ್ ಅವರ ಮನೆಯನ್ನು ಲೂಟಿ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಲಾಕರ್ ಭದ್ರವಾಗಿತ್ತು.ಅವನು ಕದ್ದು ಮಾಡಿದ ಹಣವಾಗಿರಲಿಲ್ಲ.ದುಡಿದು ಮಾಡಿದ್ದು.ಅದೇನೋ ಅಂತಾರಲ್ಲ ಸಮುದ್ರದ ನೀರನ್ನು ಖಾಲಿ ಮಾಡಿದಷ್ಟೂ ಅದು ಹೆಚ್ಚಾಗುತ್ತೆ ಅಂತ, ಇದೂ ಹಾಗೆಯೇ ಅಪ್ಪಯ್ಯ ದೀಕ್ಷಿತ್ ದಾನ ಧರ್ಮದಿಂದ ಘನತೆ ಸಂಪಾದಿಸಿದ ವ್ಯಕ್ತಿ.ಇತ್ತ ಅಪ್ಪಯ್ಯ ದೀಕ್ಷಿತ್ ದೂರದ ಊರಿಗೆ ಹೋಗುತ್ತಿರುವಾಗ ದಾರಿಯಲ್ಲಿ ಅವರನ್ನು ಮುಗಿಸಿ ಅವರ ಹೆಣವನ್ನು ಅಲ್ಲಿಯೇ ಕಾಡಿನಲ್ಲಿ ಸುಟ್ಟು ಸಂಜೆಯ ವೇಳೆಗೆ ಮನೆಗೆ ಬಂದು ಅವರ ಕುಟುಂಬದ ಸದಸ್ಯರಿಗೆ ಈ ಸುದ್ದಿಯನ್ನು ತಿಳಿಸಿದರೆ ಅವರು ಅಪ್ಪಯ್ಯ ದೀಕ್ಷಿತ್ ನೋಡುವ ನೆಪದಲ್ಲಿ ಆಕ್ರಂದನದಿಂದ ಹೊರಟು ನಿಲ್ಲುತ್ತಾರೆ.
ಅದೇ ಸಂದರ್ಭದಲ್ಲಿ ಮನೆಗಾವಲಿಗೆಂದು ಪ್ರಾಮಾಣಿಕ ವ್ಯಕ್ತಿ ಎಂದೆನಿಸಿಕೊಂಡ ಧೀರಜ್ ನನ್ನು ಇರಿಸಿ ಹೊರಟು ಹೋಗುತ್ತಾರೆ. ಅದೇ ನಮಗೆ ಹೇಳಿಮಾಡಿಸಿದ ಸಮಯ ಎಂದುಕೊಂಡು ನಮ್ಮಲ್ಲೇ ಯಾರಾದರೊಬ್ಬರು ಧೀರಜ್ ದಿಕ್ಕು ತಪ್ಪಿಸಿ ಸಿಗುವ ಸಮಯದಲ್ಲಿ ಕೊಳ್ಳೆ ಹೊಡೆದರಾಯಿತು. ಮತ್ತೆ ಮರುದಿನ ಬೆಳಿಗ್ಗೆ ನಾವೇ ಕೆಲಸಕ್ಕೆ ಬಂದು ಸೇರಿಕೊಂಡು ಬಿಡೋಣ.ಮನೆಯವರಿಗೆ ವಿಷಯ ತಿಳಿಯುವ ವೇಳೆಗೆ ನಮ್ಮ ಕೆಲಸದ ಪ್ರತಿಶತ ೯೦ ಭಾಗ ಮುಗಿದಿರುತ್ತೆ.ತದನಂತರ ಧೀರಜ್ ಎತ್ತು ಕಟ್ಟಿ ಅವನೇ ಇವುಗಳನ್ನು ದೋಚಿದ್ದು ಎನ್ನುವ ಹಾಗೆ ಮನೆ ಯವರನ್ನು ನಂಬಿಸಿ ಬಿಡೋಣ. ಮನೆಯವರು ನಿಟ್ಟಿನಲ್ಲಿ ಅವನಿಗೆ ಹೊಡೆದು ಪೋಲಿಸ್ ಗೆ ಅವನನ್ನು ಹಿಡಿದು ಕೊಡುತ್ತಾರೆ. ಪೋಲಿಸ್ ಇನ್ವೆಸ್ಟಿಗೇಷನ್ ನಲ್ಲಿ ಯಾವುದೇ ಸುಳಿವು ಸಿಗದಂತೆ ಮಾಡಿ,ಹೊಸದೊಂದು ಸಾಕ್ಷಿ ಸೃಷ್ಟಿ ಮಾಡಿ ಧೀರಜ್ ವಿರುದ್ಧ ಕೇಸ್ ಫಿಟ್ ಮಾಡಿದರೆ ಅವನು ಅಂದರ್ .ಹೊರಗೆ ನಮ್ಮದೇ ರಾಜ್ಯ ಸ್ವಲ್ಪ ದಿನದ ಮಟ್ಟಿಗೆ ನಾವು ಕೆಲಸ ಮಾಡಿದಂತೆ ಮಾಡಿ ಅಲ್ಲಿಂದ ಒಬ್ಬೊಬ್ಬರಾಗಿ ಕೆಲಸಬಿಟ್ಟು ಹೋಗಿ ಸೆಟಲ್ ಆಗಿ ಬಿಡೋಣ. ಎಂದು ಸಂಚು ಹೂಡಲಾಯಿತು.